ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕೊಡುಗೆಗಳು

ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕೊಡುಗೆಗಳು

ಪರೀಕ್ಷೆಗೆ ಮುಖ್ಯವಾದ ಬಿರುದುಗಳು ಮತ್ತು ಘೋಷಣೆಗಳು

ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕೊಡುಗೆಗಳು

ಹೋರಾಟಗಾರರ ಹೆಸರು ಪ್ರಮುಖ ಕೊಡುಗೆಗಳು ಮತ್ತು ಪಾತ್ರ
ಮಹಾತ್ಮ ಗಾಂಧಿ ಸತ್ಯಾಗ್ರಹ, ಅಸಹಕಾರ ಮತ್ತು ಕ್ವಿಟ್ ಇಂಡಿಯಾ ಚಳುವಳಿಯ ನಾಯಕ. ರಾಷ್ಟ್ರಪಿತ, ಅಹಿಂಸೆಯ ತತ್ವದ ಪ್ರಚಾರಕ.
ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನ ಮಂತ್ರಿ. ಯೋಜನಾ ಆಯೋಗದ ಸ್ಥಾಪಕ; ಮಕ್ಕಳ ದಿನಾಚರಣೆ (ನವೆಂಬರ್ 14).
ಭಗತ್ ಸಿಂಗ್ ಅತ್ಯಂತ ಪ್ರಭಾವಶಾಲಿ ಕ್ರಾಂತಿಕಾರಿ; ಲಾಹೋರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಾತ್ರವಹಿಸಿದರು.
ಚಂದ್ರಶೇಖರ ಆಜಾದ್ HSRA ಸಂಘಟನೆಯ ಪುನರ್‌ಸಂಘಟಕ; "ಆಜಾದ್" ಎಂದು ಬಿರುದು ಪಡೆದರು.
ರಾಣಿ ಲಕ್ಷ್ಮೀಬಾಯಿ 1857 ರ ದಂಗೆನಲ್ಲಿ ಪ್ರಮುಖ ಮಹಿಳಾ ನಾಯಕಿ.
ದಾದಾಭಾಯಿ ನವರೋಜಿ 'ಭಾರತದ ಅನಧಿಕೃತ ರಾಯಭಾರಿ' — 'ಸಂಪತ್ತಿನ ಸೋರಿಕೆ' ಸಿದ್ಧಾಂತದ ಪ್ರತಿಪಾದಕ.
ಗೋಪಾಲ ಕೃಷ್ಣ ಗೋಖಲೆ ಮಹಾತ್ಮ ಗಾಂಧಿಯವರ ರಾಜಕೀಯ ಗುರು; ಸಮಾಜ ಸುಧಾರಕ.
ಉದ್ಹಾಮ್ ಸಿಂಗ್ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಪ್ರತೀಕಾರಕ್ಕಾಗಿ ಮೈಕೆಲ್ ಓ’ಡ್ವೈರ್‌ರನ್ನು ಹತ್ಯೆಗೈದರು.
ವಿನಾಯಕ ದಾಮೋದರ ಸಾವರ್ಕರ್ 'ದಿ ಫಸ್ಟ್ ವಾರ್ ಆಫ್ ಇಂಡಿಪೆಂಡೆನ್ಸ್' ಪುಸ್ತಕ ರಚನೆ; ಹಿಂದೂ ಮಹಾಸಭಾದ ನಾಯಕ.
ಬೇಗಂ ಹಜರತ್ ಮಹಲ್ 1857 ರ ದಂಗೆನಲ್ಲಿ ಮೊದಲ ಮಹಿಳಾ ನಾಯಕಿ.
ಅರುಣಾ ಅಸಫ್ ಅಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ನಾಯಕತ್ವ ವಹಿಸಿದರು; "ಇನ್‌ಕ್ವಿಲಾಬ್" ಪತ್ರಿಕೆಯ ಸಂಪಾದಕಿ.
ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕ.
ಚಿತ್ತರಂಜನ್ ದಾಸ್ ಸ್ವರಾಜ್ ಪಕ್ಷದ ಸ್ಥಾಪಕ; ಬಂಗಾಳದ ಅಸಹಕಾರ ಚಳುವಳಿಯ ನಾಯಕ.
ಪಿಂಗಾಳಿ ವೆಂಕಯ್ಯ ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರ.

ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಪ್ರಮುಖ ಘಟನೆಗಳು

KPSC Footer